21.5.07

ಎಲ್ಲಿ ಇರುವುದು ಉತ್ತಮ

ನಮ್ಮ ಬುದ್ದಿ ಬೆಳೆವಣಿಗೆಗೆ,
ಬಾವಿಯ ಕಪ್ಪೆಯಾಗುವುದಕ್ಕಿಂತ, ಸಮುದ್ರದ ಕಪ್ಪೆಯಾಗುವುದು ಓಳಿತು,
ನಮ್ಮ ಸಾಧನೆಯನ್ನ ಗುರಿತಿಸುಕೊಳ್ಳುವುದಕೆ,
ಸಮುದ್ರದಲ್ಲಿ ತಿಮಿಂಗಲ ಆಗುವುದಕ್ಕಿಂತ, ಬಾವಿಯ ಮೀನಾಗುವುದು ಓಳಿತು,

ಅಲ್ವೇ ?
--> ನವೀ.

ಸಚಿನ್-ಗಂಗೂಲಿ




"ಮುರಿದ ಸುದ್ದಿ" [Breaking News]: ಬಾಂಗ್ಲಾ ವಿರುದ್ದ ಟೆಸ್ಟ್ ಪಂದ್ಯದಲ್ಲಿ, ಸಚಿನ್-ಗಂಗೂಲಿ ಶತಕ.
"ನವೀ-ಉವಾಚ": ಪರವಾಗಿಲ್ವೆ, ಅವರಿಬ್ಬರಿಗೂ ಇನ್ನು, ’ಶತಕ’ಅಂದ್ರೆ ಎನೂ ಅಂತ ಇನ್ನೂ ಗೊತ್ತಿದೆ !

ಚಿತ್ರ - ಗೀತೆ




ಅರಸುವಿನ ಅಪ್ಪಣೆಯೋ ಎಂಬಂತೆ, ಆಕಾಶ ಹಾಡಿತು,
ಮುಂಗಾರುಮಳೆಯ ಆರ್ಭಟಕ್ಕೆ ಕಲ್ಲರಳಿ ಹೂವಾಗಿ ನಲಿಯಿತು,
ನೆನಪಿರಲಿ ಗೆಳತಿ, ನಿನ್ನ ಚೆಲ್ಲಾಟ, ನನ್ನ ಹುಡುಗಾಟ,
ನಿನ್ನ ಜೊತೆ ಜೊತೆಯಲಿ ನಡೆದಾಗ ಎಲ್ಲೆಲ್ಲೂ ಕಂಡ ಸೇವಂತಿ ಸೇವಂತಿ,

ಪ್ರೀತಿ ಏಕೆ ಭೂಮಿ ಮೇಲಿದೆ ತಿಳಿಯಿತು ಈಗ ನಿನ್ನ ಈ ಕರಿಯನಿಗೆ,
ನಮ್ಮ ಬಸವನ ಮೇಲಾಣೆ ನನ್ನ ಐಶ್ವರ್ಯ ನೀನು,
ನಾ ನಿನ್ನ ಪೂಜಾರಿ ನಿನಗಾಗಿ ಕ್ಷಣ ಕ್ಷಣವೂ ನೋಡುತಿರುವೆ,
ರಕ್ತಕಣ್ಣೀರು ಇಡುತ ನಿನ್ನ ಪ್ರೀತಿಗಾಗಿ ಕಾಯುತಿರುವೆ,

ಅಮೃತಧಾರೆ ಕೇಳದೆ ಈ ಗೊಲ್ಲನ ಕೋಳಲುನಾದ,
ಮಾತಾಡ್ ಮಾತಾಡು ಮಲ್ಲಿಗೆ ನಿನ್ನ ಈ ಮದನನ್ನು,
ಸಿದ್ದವಿದೆ ಹೂವಿನ ಪಲ್ಲಕ್ಕಿ ನಮ್ಮ ಮಿಲನಕಾಗಿ,
ನನ್ನ ದುನಿಯದಲ್ಲಿ ಕಾಯುತಿರುವೆ ಗೆಳತಿ, ನನ್ನ ವಿಳಾಸ,
ನಂ 73, ಶಾಂತಿನಿವಾಸ.

--> ನವೀ.

ಪಿ.ಯು.ಸಿ ಪಲಿತಾಂಶ



"ಮುಖ್ಯ ಸುದ್ದಿ" [Headlines]: ಕರ್ನಾಟಕ 2007ರ ಪಿ.ಯು.ಸಿ ಪಲಿತಾಂಶ ಪ್ರಕಟ. 50% ಅನುತ್ತೀರ್ಣರಾಗಿದ್ದಾರೆ.
"ನವೀ-ಉವಾಚ": ಸ್ವಾಮಿ, ಮಿಕ್ಕ 50% ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರಲ್ಲ, ಖುಷಿಪಡಿ. ಈಗಿನ ಕಾಲದಲ್ಲೂ ಕೆಲವರು ಕಾಲೇಜ್ ಗೆ ಓದೋಕೆ ಬರತಾ ಇದ್ದಾರಲ್ಲ !

20.5.07

"ಮುಂಗಾರು ಮಳೆ"



"ಮುಖ್ಯ ಸುದ್ದಿ" [Headlines]: "ಮುಂಗಾರು ಮಳೆ" ನೂರು ಚಿತ್ರಮಂದಿರಗಳಲ್ಲಿ ಶತದಿನೋತ್ಸವ. "ಲಂಡನ್" ಮತ್ತು "ಜರ್ಮನಿ" ಗಳಲ್ಲೂ ಪ್ರದರ್ಶನ".

"ನವೀ-ಉವಾಚ": ಸ್ವಾಮಿ, "ಕನ್ನಡತನ" ತುಂಬಿರುವ ಚಿತ್ರಗಳು ನೂರೇನು, ಸಾವಿರ ದಿನಗಳೂ ಓಡುತ್ವೆ. "ಲಂಡನ್","ಜರ್ಮನಿ" ಮಾತ್ರವೇನು "ಇರಾಕ್" ನಲ್ಲೂ ಚೆನ್ನಾಗಿ ಓಡುತ್ತೆ. ಏನಂತಿರ !?

ಹುಡುಕಾಟ

Google

ಎಲ್ಲಿಂದ ನೋಡಿದರು