ಅರಸುವಿನ ಅಪ್ಪಣೆಯೋ ಎಂಬಂತೆ, ಆಕಾಶ ಹಾಡಿತು,
ಮುಂಗಾರುಮಳೆಯ ಆರ್ಭಟಕ್ಕೆ ಕಲ್ಲರಳಿ ಹೂವಾಗಿ ನಲಿಯಿತು,
ನೆನಪಿರಲಿ ಗೆಳತಿ, ನಿನ್ನ ಚೆಲ್ಲಾಟ, ನನ್ನ ಹುಡುಗಾಟ,
ನಿನ್ನ ಜೊತೆ ಜೊತೆಯಲಿ ನಡೆದಾಗ ಎಲ್ಲೆಲ್ಲೂ ಕಂಡ ಸೇವಂತಿ ಸೇವಂತಿ,
ಪ್ರೀತಿ ಏಕೆ ಭೂಮಿ ಮೇಲಿದೆ ತಿಳಿಯಿತು ಈಗ ನಿನ್ನ ಈ ಕರಿಯನಿಗೆ,
ನಮ್ಮ ಬಸವನ ಮೇಲಾಣೆ ನನ್ನ ಐಶ್ವರ್ಯ ನೀನು,
ನಾ ನಿನ್ನ ಪೂಜಾರಿ ನಿನಗಾಗಿ ಕ್ಷಣ ಕ್ಷಣವೂ ನೋಡುತಿರುವೆ,
ರಕ್ತಕಣ್ಣೀರು ಇಡುತ ನಿನ್ನ ಪ್ರೀತಿಗಾಗಿ ಕಾಯುತಿರುವೆ,
ಓ ಅಮೃತಧಾರೆ ಕೇಳದೆ ಈ ಗೊಲ್ಲನ ಕೋಳಲುನಾದ,
ಮಾತಾಡ್ ಮಾತಾಡು ಮಲ್ಲಿಗೆ ನಿನ್ನ ಈ ಮದನನ್ನು,
ಸಿದ್ದವಿದೆ ಹೂವಿನ ಪಲ್ಲಕ್ಕಿ ನಮ್ಮ ಮಿಲನಕಾಗಿ,
ನನ್ನ ದುನಿಯದಲ್ಲಿ ಕಾಯುತಿರುವೆ ಗೆಳತಿ, ನನ್ನ ವಿಳಾಸ,
ನಂ 73, ಶಾಂತಿನಿವಾಸ.
--> ನವೀ.
No comments:
Post a Comment