27.5.07
ಕಂಗ್ಲೀಷ್ ಶಾಲೆಗಳ - ಗೂಂಡಾಗಿರಿ
ಕಂಗ್ಲೀಷ್ ಶಾಲೆಗಳ ವಿರುದ್ಧ ಹೋರಾಡೋಣ ಬನ್ನಿ "ಹೋರಟ್ಟಿ"
ಮೊದಲು ಈ ಗೂಂಡಾಗಳನ್ನು ನಮ್ಮ ರಾಜ್ಯದಿಂದ "ಹೋರಗಟ್ಟಿ" --> ನವೀ.
~~~~~~~~~~~~~~~~~~~~~~~~~~~~~~~~~~~~~~~
"ಕನ್ನಡ" ಮಾಧ್ಯಮದಲ್ಲಿ ಪಾಠ ಮಾಡುತ್ತೇವೆಂದು ಅನುಮತಿ ಪಡೆದು, ಆಂಗ್ಲ ಮಾಧ್ಯಮದಲ್ಲಿ ಪಾಠ ಹೇಳಿ, ದುಡ್ಡು ಮಾಡುತ್ತಿರುವ (ಕಂಗ್ಲೀಷ್) ಶಾಲೆಗಳ ವ್ಯವಸ್ಥಾಪಕರನ್ನು, "ಗೂಂಡಾ" ಗಳೆಂದು ಕರೆಯಬಹುದಲ್ಲವೆ ?. ಅಲ್ಲದೆ, ಮಾಡುತ್ತಿರುವ ಅನಾಚಾರವನ್ನು ರಾಜರೋಷವಾಗಿ ಮಾಡುತ್ತಿರುವ ಇವರಿಗೆ ನಾಚಿಗೆ ಅಗೋಲ್ಲವೆ ?
ಇಲ್ಲಿ ಪ್ರಶ್ನೆ, ಯಾವ ಮಾಧ್ಯಮ ಉತ್ತಮ ಅಥವ ಯಾವ ಭಾಷೆಯಲ್ಲಿ ಕಲಿತರೆ ಮುಂದೆ ಭವಿಷ್ಯ ಉಜ್ವಲವಾಗಿರುತ್ತೆ ಎಂದು ಅಲ್ಲ. ಇಲ್ಲಿ ಪ್ರಶ್ನೆ, ಯಾವ ಸರಕಾರ ಹೀಗೆ ಮಾಡುತ್ತಿದೆ ಎಂದೂ ಅಲ್ಲ. ಇಲ್ಲಿ ಮುಖ್ಯವಾದುದು, ಕಾನೂನಿನ ಪರಿಪಾಲನೆ ಅಗುತ್ತಿದೆಯೆ ಇಲ್ಲವೆ ಎಂಬುದು.
ಕಂಗ್ಲೀಷ್ ಶಾಲೆಗಳಿಗೊಂದು ಸಂಘವಂತೆ, ಅದಕ್ಕೂ ಒಬ್ಬ ಅಧ್ಯಕ್ಷನಂತೆ ! ಗೂಂಡಾಗಳಿಗೂ ಒಬ್ಬ ಅಧ್ಯಕ್ಷ !
ಅತಿ ಪವಿತ್ರವಾದ ನ್ಯಾಯಾಲಯ ಹೇಳಿದಮೇಲೂ, ಆ ಆದೇಶವನ್ನು ಪರಿಪಾಲಿಸಲಾಗುವುದಿಲ್ಲ ಎಂದು ಹೇಳುತ್ತಿರುವ ಇವರ ಮೊಂಡು ಧೈರ್ಯಕ್ಕೆ "ಶಭಾಷ್" ಎನ್ನಬೇಕೆ ? ಕಾನೂನಿನ ಧಿಕ್ಕಾರ, ಶಾಲೆಗಳ್ಳೇ ಶುರುವಾಯಿತೆ ? ಇನ್ನೇನು ಉಳಿದಿದೆ ?
ಓಳ್ಳೆಯ ಜ್ನಾನ ಕಲಿಸಿಕೊಡಬೇಕಾದ ಶಾಲೆಗಳು, ತಾವೇ ಸರಕ್ಕಾರಕ್ಕೆ ಮೊಸ ಮಾಡಲು ಶುರುಮಾಡಿದರೆ, ಸಂವಿಧಾನ ಏತಕ್ಕೆ ? ಆಥವಾ, ಇಂತಹ ಶಾಲೆಗಳಲ್ಲಿ ನಮ್ಮ ಮಕ್ಕಳನ್ನು ಕಲಿಯಲು ಬಿಟ್ಟರೆ, ಎನನ್ನು ಕಲಿತಾವು ? ಓಳ್ಳೆತನವೆ ಅಥವಾ ಮೊಸಗಾರಿಕೆಯೆ ?
ಗಾಂಧಿಗಿರಿಯೇ ಅಥವಾ ಗೂಂಡಾಗಿರಿಯೇ ?
ಅತಿ ದೊಡ್ಡ ಸಂವಿದಾನ ಹೊದಿರುವ ದೇಶದಲ್ಲಿ, ನ್ಯಾಯಾಂಗಕ್ಕೆ ದಿಕ್ಕಾರವೆ ? ಸಂವಿದಾನಕ್ಕೆ ಅವಮಾನವೆ ?
ಕಂಗ್ಲೀಷ್ ಶಾಲೆಗಳ ಈ ಗೂಂಡಾಗಳಿಗೆ ಅಷ್ಟು ಧೈರ್ಯವಿದ್ದರೆ, ಆಂಗ್ಲ ಭಾಷೆಯ ಅನುಮತಿ ಪಡೆದು ಅದರಲ್ಲೆ ಹೇಳಿಕೊಡಲಿ. ಇಲ್ಲ, ಸರಕಾರ ಹಾಕಿರುವ ಶುಲ್ಕ ಕಟ್ಟಿ ಮಾಧ್ಯಮವನ್ನು ಬದಲಾಲಿಯಿಸಿಕೊಳಲಿ. ಇದನ್ನು ಮಾಡದೆ, ರಾಜಾರೊಷವಾಗಿ, ನ್ಯಾಯಾಂಗದ ಆದೇಶವನ್ನು ತಿರಸ್ಕರಿಸುತ್ತ, "ಕನ್ನಡ" ಮಾಧ್ಯಮಕ್ಕೆ ಅನುಮತಿ ಪಡೆದಿದ್ದರು, ತಮಗಿಷ್ಟ ಬಂದಂತೆ ಮಾಡುತ್ತೇವೆ ಎನ್ನುತ್ತಿರುವ ಈ ಗೂಂಡಾಗಳನ್ನು ನಮ್ಮ ರಾಜ್ಯದಿಂದೇನು, ನಮ್ಮ ದೇಶದಿಂದಲೇ ಹೊರಗಟ್ಟ ಬೇಕಿದೆ.
ಇಲ್ಲದಿದ್ದರೆ, ನಮ್ಮ ದೇಶಕ್ಕೆ, ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗದ ಅವಶ್ಯಕತೆಯಾದರೂ ಏನೂ ?
ನಾವೇಲ್ಲ ನಿಮ್ಮ ಜೊತೆಗಿದ್ದೇವೆ, ಬನ್ನಿ ಹೊರಟ್ಟಿ, ಗೂಂಡಾಗಳನ್ನು ಹೊರಗಟ್ಟಿ........
Subscribe to:
Post Comments (Atom)
1 comment:
ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ೬ನೇ ಸ್ವಾಭಿಮಾನಿ ಕನ್ನಡಿಗರ ಸಮಾವೇಶ
ದಿನಾಂಕ: ಸೆಪ್ಟಂಬರ್ ೨೮, ೨೯
ಸ್ಥಳ: ಬೆಂಗಳೂರಿನ ಅರಮನೆ ಮೈದಾನ
ಎಲ್ಲ ಕನ್ನಡಿಗರು ಈ ಸಮಾವೇಶದಲ್ಲಿ ಭಾಗವಹಿಸುವುದಾಗಿ ವಿನಂತಿ
http://karnatakarakshanavedike.org/modes/view/50/6ne-swaabhimaani-kannadigara-samavesha.html
Post a Comment